Monday, May 10, 2021

Application for Income Certificate

How to apply income certificate Karnataka / ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ 



ಅಗತ್ಯವಿರುವ ದಾಖಲೆಗಳು ಯಾವುವು?

ಅರ್ಜಿ ನಮೂನೆ 

ಆಧಾರ್ ಕಾರ್ಡ್ 

ರೇಷನ್ ಕಾರ್ಡ್ 

ಬಾಂಡ್ (20 Rs)

Passport Size ಫೋಟೋ (SC/ST ಯವರಿಗೆ ಮಾತ್ರ)

SC/ST ಗೆ ಸೇರಿದ ಬಗ್ಗೆ ನೋಟರಿ

ಅರ್ಜಿ ಅರ್ಜಿ 

ಅರ್ಜಿ ಸಲ್ಲಿಸುವ ವಿಧಾನ

ನಾಡಕಛೇರಿ ಸೈಟ್ ತೆರೆಯಿರಿ ಮತ್ತು ಲಾಗಿನ್ ಐಡಿಯೊಂದಿದೆ ಲಾಗಿನ್ ಮಾಡಿ

Dashboard ನಲ್ಲಿ ಕಾಣುವ "Nadakacheri Services"  ಐಕಾನ್ ಮೇಲೆ ಕ್ಲಿಕ್ ಮಾಡಿ


ರೇಷನ್ ಕಾರ್ಡ್ ಇದ್ದು ರೇಷನ್ ಕಾರ್ಡಿನಲ್ಲಿ ಹೆಸರಿದ್ದರೆ

1. ಈಗ "New Request" ನಲ್ಲಿ ಕಾಣುವ "Income Certificate"ಮೇಲೆ ಕ್ಲಿಕ್ ಮಾಡಿ  

2. "Ration Card" ಐಕಾನ್ ಮೇಲೆ ಕ್ಲಿಕ್ ಮಾಡಿ ರೇಷನ್ ಕಾರ್ಡ್ ನಂಬರ್ ನಮೂದಿಸಿ "GO' ಮೇಲೆ ಕ್ಲಿಕ್ ಮಾಡಿ 

3. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಉಪ ಗ್ರಾಮವನ್ನು ಸೆಲೆಕ್ಟ್ ಮಾಡಿ 

4. ನಿಮಗೆ ಪ್ರಮಾಣ ಪತ್ರ ಯಾವ ಭಾಷೆಯಲ್ಲಿ ಬೇಕು ಎಂಬುದನ್ನು ಸೆಲೆಕ್ಟ್ ಮಾಡಿ

5. ಹೆಸರಿನ ಲಿಸ್ಟಿನಿಂದ ನಿಮಗೆ ಬೇಕಾದ ಹೆಸರನ್ನು ಸೆಲೆಕ್ಟ್ ಮಾಡಿ

6. ನಂತರ ತಂದೆಯ ಅಥವಾ ಪತಿಯ ಹೆಸರನ್ನು ನಮೂದಿಸಿ

7. "Search" ಮೇಲೆ ಕ್ಲಿಕ್ ಮಾಡಿ

(ಈಗ ವ್ಯಕ್ತಿಯ ಆದಾಯ ಪ್ರಮಾಣ ಪತ್ರ ಮುಂಚಿತವಾಗಿ ಇದ್ದರೆ ಅದನ್ನೇ ಖಚಿತಪಡಿಸಿಕೊಂಡು ಬಳಸಬಹುದು.

ಒಂದು ವೇಳೆ ಹಳೆ ಪ್ರಮಾಣ ಪತ್ರ ಬಂದರೂ, ಸರಿಯಾಗಿ ತಾಳೆ ಯಾಗದಿದ್ದರೆ ಅದನ್ನು "Reject" ಮಾಡಬಹುದು

ಅಥವಾ ಹಳೆಯ ಪ್ರಮಾಣ ಪತ್ರ ಇಲ್ಲದಿದ್ದರೆ “Could not find any signed certificate” ಎಂದು ಬರುವುದು “OK” ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ  ಹೊಸದಾಗಿ ಅರ್ಜಿ ಸಲ್ಲಿಸುವ ವಿಂಡೋ ತೆರೆದುಕೊಳ್ಳುವುದು) 

8. ವಿಂಡೋದಲ್ಲಿ ಅರ್ಜಿದಾರನ ಎಲ್ಲ ವಿವರವನ್ನು ತುಂಬಿ "'Upload Required Scan Documents" ಮೇಲೆ ಕ್ಲಿಕ್ ಮಾಡಿ 

9. ಈಗ ಬೇಕಿರುವ ಎಲ್ಲ ಡಾಕ್ಯೂಮೆಂಟ್ಸ್ ಗಳನ್ನೂ ಸ್ಕ್ಯಾನ್ ಮಾಡಿ ಒಂದೊಂದಾಗಿ ಅಪ್ಲೋಡ್ ಮಾಡಿ

(ಅಪ್ಲೋಡ್ ಮಾಡುವಾಗ "Choose File" ಮೇಲೆ ಕ್ಲಿಕ್ ಮಾಡಿ ನಂತರ "Upload" ಮೇಲೆ ಕ್ಲಿಕ್ ಮಾಡಿ)

(ಎಲ್ಲ ಫೈಲ್ ಅಪ್ಲೋಡ್ ನಂತರ "Save" ಮೇಲೆ ಕ್ಲಿಕ್ ಮಾಡಿ)

10. ಇದಾದ ಬಳಿಕ ಕಾಣುವ "Enter Image Value" ಎಂಟರ್ ಮಾಡಿ "Save" ಮೇಲೆ ಕ್ಲಿಕ್ ಮಾಡಿ.

11. "Save" ಮೇಲೆ ಕ್ಲಿಕ್ ಮಾಡಿದಾಗ ಒಂದು ಪಾಪ್ ಅಪ್ ಮೆನುವಿನಲ್ಲಿ RD ನಂಬರ್ ಕಾಣುವುದು ಅದನ್ನು ಜೋಪಾನವಾಗಿ copy ಮಾಡಿಕೊಳ್ಳಿ ಇಲದಿದ್ದರೆ ಅರ್ಜಿಯು ಮರುಕಳಿಸಲಾಗುವುದಿಲ್ಲ

12.ಇದಾದ ನಂತರ "Save" ಮುಂದಿನ “Online Payment” ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿ ಮಾಡಿ

13. ಹಣದ ಪಾವತಿ ಯಾದ ನಂತರ "Application Form" ಬರುವುದು

14. ಇದನ್ನು ಪ್ರಿಂಟ್ ಮಾಡಿ ಹಾಗು ಅರ್ಜಿಗೆ ಪಡೆದು ಕೊಂಡ ಎಲ್ಲ ಡಾಕ್ಯೂಮೆಂಟ್ಸ್ ಪ್ರತಿಯೊಂದಿಗೆ ಅಂಟಿಸಿ ನೆಮ್ಮದಿ ಕೇಂದ್ರಕ್ಕೆ ಕೊಡಬೇಕು.

ರೇಷನ್ ಕಾರ್ಡ್ ಇಲ್ಲದಿದ್ದರೆ ಅರ್ಜಿದಾರರ Aadhar Number ನಮೂದಿಸಿ "GO" ಮೇಲೆ ಕ್ಲಿಕ್ ಮಾಡಿ, ಅದಾದ ನಂತರ ಅವರ ಹೆಸರನ್ನು ಆಧಾರ್ ಕಾರ್ಡಿನಲ್ಲಿರುವಂತೆ ನಮೂದಿಸಬೇಕು. ಮುಂದಿನ ಎಲ್ಲ ವಿಧಾನಗಳು ಮೇಲೆ ತಿಳಿಸಿದಂತೆ ಬರುವುದು

ಗಮನಿಸಿ: ನೀವು Online ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ನೆಮ್ಮದಿಕೇಂದ್ರ 3 ದಿನಗಳ ಒಳಗೆ ನೀಡದಿದ್ದರೆ ನಿಮ್ಮ ಅರ್ಜಿಯು ತಿರಸ್ಕ್ರತವಾಗುವುದು.

Download PDF to view Steps with screenshots


No comments:

Post a Comment